ಹವ್ಯಾಸಿ
ನಾಟಕ, ಜನಪದ ರಂಗಭೂಮಿ, ಯಕ್ಷಗಾನಗಳು
ಹಳ್ಳಿಗಳಲ್ಲಿ ಮಾತ್ರ ಪ್ರದರ್ಶನವಾಗುತ್ತಿದ್ದವು. ಆದರೆ ಇತ್ತೀಚೆಗೆ
ಆಕಾಶವಾಣಿ, ಚಲನಚಿತ್ರ, ದೂರದರ್ಶನ
ಮುಂತಾದ ಆಧುನಿಕ ಮಾಧ್ಯಮಗಳು
ಜನಪದಕಲೆಯನ್ನ, ಜನಪದ ಕಥೆಯನ್ನ,
ಯಕ್ಷಗಾನವನ್ನ ಹಾಗೂ ಜನಪದ
ರಂಗಭೂಮಿ ಅಲ್ಲದೆ ಇವುಗಳ ತಂತ್ರಜ್ಞಾನವನ್ನು ಕೂಡ
ಬಳಸಿಕೊಂಡು ದೇಶದ ಸಮಸ್ಯೆಗಳನ್ನು, ಅರಿವನ್ನು, ಶಿಕ್ಷಣದ ಮಹತ್ವವನ್ನು ಜನಸಾಮಾನ್ಯರಿಗೆ
ತಿಳಿಯಪಡಿಸುವ ಸಾರ್ಥಕ ಪ್ರಯತ್ನ
ನಡೆಸುತ್ತಿವೆ.
ಸಾಕ್ಷರತೆಯ
ಪ್ರಚಾರ, ವರಧಕ್ಷಿಣೆ ವಿರೋಧಿ
ನೀತಿ, ಕುಟಂಬ ಯೋಜನೆ,
ಹಸಿರು ಕ್ರಾಂತಿ ಮುಂತಾದ
ಅನೇಕ ಕಾರ್ಯಕ್ರಮಗಳನ್ನ ಪರಿಣಾಮಕಾರಿಯಾಗಿ ಜನಸಾಮಾನ್ಯರಿಗೆ ಬಿಂಬಿಸಲು ಜಾನಪದ ಮಾಧಮಗಳನ್ನು
ಬಳಸಿಕೊಳ್ಳಲಾರಂಭಿಸಿದರು. ಪ್ರದರ್ಶನ ಜನಪದ ಕಲಾ ಮಾಧ್ಯಮಗಳಾದ ಯಕ್ಷಗಾನಗಳ ತಂತ್ರ,
ವೇಷಭೂಷಣ, ಬಣ್ಣಗಾರಿಕೆ, ಕುಣಿತ
ಮುಂತಾದ ವೈಶಿಷ್ಟ್ಯಗಳನ್ನು ಶಿಷ್ಟ ಮಾಧ್ಯಮಗಳೂ ಸಾಕಷ್ಟು ಬಳಸಿಕೊಡಿವೆ.
ಪ್ರಸ್ತುತದ ಕಲಾ ಚಲನಚಿತ್ರಗಳಲ್ಲಿ ಜಾನಪದದ ಪ್ರಭಾವವನ್ನ ಗುರುತಿಸಬಹುದು. ಹಲವಾರು ಚಲನಚಿತ್ರಗಳಲ್ಲಿ ಜನಪದ ಕಥೆ, ಜನಪದ ಹಾಡು,
ಜನಪದ ವಾದ್ಯ, ಸಂಗೀತ, ನೃತ್ಯಗಳನ್ನು
ಬಳಸಿಕೊಂಡ ನಿದರ್ಶನಗಳನ್ನ ಕಾಣಬಹುದು. ಟಿ.ಎಸ್.ನಾಗಾಭರಣರ ‘ಜನುಮದ ಜೋಡಿ’, ‘ನಾಗಮಂಡಲ’,
ಪಿ.ಶೇಷಾದ್ರಿಯವರ ‘ಬೇರು’
ಚಲನಚಿತ್ರದಲ್ಲಿ ಗೊರವಯ್ಯನ ಜನಪದ ಉಡುಪು, ಗಿರೀಶ್ ಕಾಸರವಳ್ಳಿಯವರ
‘ದ್ವೀಪ’ ಚಲನಚಿತ್ರದಲ್ಲಿ ನೇಮ ಮಾಡುವ ಭೂತಾರಾಧನೆ
ಇಂತಹ ಹಲವಾರು ಚಲನಚಿತ್ರಗಳಲ್ಲಿ ಜಾನಪದದ ಛಾಯೆ ಕಾಣಬಹುದು. ಅಲ್ಲದೆ ಜನಪ್ರಿಯ
ವಾಣಿಜ್ಯಿಕ ಚಲನಚಿತ್ರಗಳಲ್ಲಿಯೂ ಜಾನಪದ ಕಲೆಗಳನ್ನು ವಿಚಿತ್ರವಾಗಿ ಬಳಸಿಕೊಂಡು ಯಶಸ್ಸು ಪಡೆಯುತ್ತಿದ್ದಾರೆ.
ದೇಶಿ
ಸಂಸ್ಕೃತಿಯ ಕಣ್ಣಾದ ಜನಪದ
ಮಾಧ್ಯಮಗಳನ್ನ ಬಳಸಿಕೊಂಡು ಸಮಕಾಲೀನ
ಮಹತ್ವದ ಅಂಶಗಳನ್ನು ಮತ್ತು
ಅರಿವನ್ನು ಮೂಡಿಸಲು ಸರ್ಕಾರ
ಪ್ರಯತ್ನಿಸಿದೆ. ಸಾಕ್ಷರತೆಯನ್ನು ಬಿತ್ತಲು
“ಸಾಕ್ಷರತೆ
ಪ್ರಚಾರ ಕಾರ್ಯಕ್ರಮ”, ವರದಕ್ಷಿಣೆ
ನಿಯಂತ್ರಿಸಲು “ವರದಕ್ಷಿಣೆ ವಿರೋಧಿ
ನೀತಿ ಕಾರ್ಯಕ್ರಮ”, ಜನಸಂಖ್ಯಾ
ನಿಯಂತ್ರಣಕ್ಕಾಗಿ “ಕುಟುಂಬ ಯೋಜನೆ
ಕಾರ್ಯಕ್ರಮ”, ಹಸಿರು ಕ್ರಾಂತಿ,
ಏಡ್ಸ್ ನಿರ್ಮೂಲನೆ, ಪಲ್ಸ್
ಪೋಲಿಯೋ, ಚಿಕ್ಕನ್ ಗುನ್ಯಾ
ನಿಯಂತ್ರಣ, ಮುಂತಾದ ಕಾರ್ಯಕ್ರಮಗಳನ್ನ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು
ಯಕ್ಷಗಾನವನ್ನ ಬಳಸಿಕೊಂಡಿದ್ದಾರೆ.
ಸರ್ಕಾರದ
ಹೊಸ ಹೊಸ ಯೋಜನೆಗಳು
ಜನಸಾಮಾನ್ಯರ ಮಟ್ಟಕ್ಕೆ ತಲುಪಲು,
ಹಲವು ಉಪಯುಕ್ತ ವಿಚಾರಗಳ
ಸಂಚಾರಕ್ಕೆ ಮತ್ತು ಜನಜಾಗೃತಿಗೆ
ಯಕ್ಷಗಾನದ ಬಳಕೆ ಚಾಲ್ತಿಯಲ್ಲಿದೆ.
ಜನಪದ ಮಾಧ್ಯಮ ಮುಖಾಮುಖಿ
ಮಾಧ್ಯಮವಾದ ಕಾರಣ ಗ್ರಾಮೀಣ
ಜನರಿಗೆ ಸುಲಭವಾಗಿ ಅರ್ಥೈಸಲೂ
ಬಹುದು.
ಇಂದಿಗೂ
ಬಹುತೇಕ ಗ್ರಾಮೀಣರು ಯಕ್ಷಗಾನ
ಪ್ರಿಯರಿದ್ದಾರೆ. ಯಕ್ಷಗಾನ ನೈತಿಕ
ಮೌಲ್ಯಗಳನ್ನು ತಿಳಿಸುವ ಮಾಧ್ಯಮವಾದ್ದರಿಂದ ಇದರ ಮೂಲಕ
ಅಭಿವೃದ್ಧಿ ಸಂದೇಶವನ್ನು ನೀಡಬಹುದು.
ಸಮೂಹ ಮಾಧ್ಯಮಗಳಲ್ಲಿ ಯಕ್ಷಗಾನವನ್ನ
ಅಳವಡಿಸಲು ಸೀಮಿತ ಅವಧಿ,
ಕೃತಕ ವೇದಿಕೆ, ಪ್ರಸಂಗ
ಅಳವಡಿಕೆ, ಸಾಹಿತ್ಯ ಸೃಷ್ಟಿ
ಮುಂತಾದ ಸಮಸ್ಯೆಗಳನ್ನು ಎದುರುಗೊಳ್ಳಬೇಕಾಗುತ್ತದೆ.
ಯಕ್ಷಗಾನ ಇಂದಿನ ಸ್ಥಿತಿ
ವೈಯಕ್ತಿಕ
ಆಸೆ ಆಕಾಂಕ್ಷೆ ಈಡೇರಿಸಿಕೊಳ್ಳಲು ಯಕ್ಷಗಾನ ಪ್ರದರ್ಶನ
ಮಾಡಬಾರದು ಎಂಬ ಬಹಳಷ್ಟು
ಕಲಾವಿದರ ಅಭಿಪ್ರಾಯವಾಗಿದೆ. ಆದರೂ
ಇಂದು ಕೆಲವರು ಯಕ್ಷಗಾನ
ಆಧರಿಸಿ ಜೀವನ ನಿರ್ವಹಿಸುತ್ತಿದ್ದಾರೆ.
ಯಕ್ಷಗಾನದ ಎಷ್ಟೋ ರಾಗಗಳು
ಈಗ ಬಳಕೆಯಲ್ಲಿಲ್ಲ. ಆದ್ದರಿಂದಲೇ
ಪರಿಷ್ಕಾರಗೊಳ್ಳಲೇ ಬೇಕಾದ
ಅನಿವಾರ್ಯತೆಯಿದೆ. ಅಲ್ಲದೆ ಇಂದು
ಪ್ರತಿಯೊಂದು ಕಡೆ ವಿವಿಧ
ಬಣ್ಣದ ಲೈಟಿಂಗ್ ಇಲ್ಲದೆ
ಪ್ರದರ್ಶನವೇ ನಡೆಯುವುದಿಲ್ಲ. ಕೆಲವೂಮ್ಮೆ
ಯಕ್ಷಗಾನ ಹಾಸ್ಯದ ಸನ್ನಿವೇಶದಲ್ಲಿ
ಅಶ್ಲೀಲ ಸಂಭಾಷಣೆಯೂ ಹೆಚ್ಚುತ್ತಿದೆ.
ಜನರ ಆಕರ್ಷಣೆಗೆ ಅವಶ್ಯಕ
ಎಂಬ ಸಮರ್ಥನೆ ಕಲಾವಿದರದ್ದು.
ಜನಾಕರ್ಷಣೆಗೆ ಯಕ್ಷಗಾನಗಳು ಸಂಪ್ರದಾಯದಿಂದ
ದೂರ ಸರಿಯುತ್ತಿವೆ. ಹೊಸ
ಹೊಸ ಆಧುನಿಕ ಪ್ರಸಂಗಗಳನ್ನು
ರಚಿಸಲಾಗುತ್ತಿದೆ.
ಸಿನಿಮಾ ಚಿತ್ರಕಥೆಗಳನ್ನ ಯಕ್ಷಗಾನ ಪ್ರಸಂಗಗಳನ್ನಾಗಿಸುತ್ತಿದ್ದಾರೆ. ಆಪ್ತಮಿತ್ರ ಸಿನಿಮಾವನ್ನ “ನಾಗವಲ್ಲಿ” ಯಕ್ಷಗಾನ ಪ್ರಯೋಗ ಇದಕ್ಕೆ ಉದಾಹರಣೆ.
ಅಲ್ಲದೆ ಮಹಿಳೆಯರು ಕೂಡ ಹವ್ಯಾಸಿ ಯಕ್ಷಗಾನ ತಂಡಗಳನ್ನ ರಚಿಸಿಕೊಂಡು ಪ್ರದರ್ಶನ ಮಾಡುತ್ತಿದ್ದಾರೆ. ಮೊದಲು ಸೀಮಿತ ಕಾಲದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಯಕ್ಷಗಾನ ಇಂದು ಎಲ್ಲಾ ಸಮಯದಲ್ಲು ಅನುಕೂಲಕ್ಕೆ ತಕ್ಕಂತೆ ಪ್ರದರ್ಶನವಾಗುತ್ತಿವೆ. ಜತೆಗೆ ಒಂದೇ ಪ್ರದರ್ಶನವನ್ನ ಎರಡು ರಂಗಮಂಟಪಗಳನ್ನ ಮಾಡಿಕೊಂಡು ಪ್ರದರ್ಶಿಸುತ್ತಿರುವ ಪ್ರಯೋಗಗಳು ನೆಡೆಯುತ್ತಿವೆ. ಇತ್ತೀಚಿಗೆ ಕೆಲವರು ರಂಗ ಸಂಜಿಕೆ ಏರ್ಪಡಿಸಲು ಸುಲಲಿತವಾಗಲೆಂದು ಲಾರಿಯ ಹಿಂಭಾಗವನ್ನೆ ವೇಧಿಕೆ ಮಾಡಿಕೊಂಡ ಪ್ರಯೋಗಗಳು ಸಿಗುತ್ತವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ